ಸೋವಿಯತ್ -
	1917ರ ರಷ್ಯ ಕ್ರಾಂತಿಯ ಅನಂತರ ಕಾರ್ಮಿಕ, ರೈತ ಹಾಗೂ ಸೈನಿಕ ವರ್ಗಗಳಿಂದ ಚುನಾಯಿತವಾದ ಮಂಡಳಿ. ಇಂಥ ಯಾವುದೇ ಮಂಡಳಿಗಳನ್ನು ರಷ್ಯದಲ್ಲಿ ಸೋವಿಯತ್ ಎಂದು ಕರೆಯುತ್ತಿದ್ದರು. ಇಂಥ ಸೋವಿಯತ್‍ಗಳು ಸ್ಥಳೀಯ ಮತ್ತು ರಾಷ್ಟ್ರೀಯ ಆಡಳಿತವನ್ನು ನಡೆಸುತ್ತಿದ್ದವು. ರಷ್ಯದ ಪಾರ್ಲಿಮೆಂಟ್ ಕೂಡ ಇಂಥ ಸೋವಿಯತ್‍ಗಳಲ್ಲೊಂದಾಗಿತ್ತು. ಇದನ್ನು ಸರ್ವೋಚ್ಚ ಸೋವಿಯತ್ (ಸುಪ್ರೀಮ್ ಸೋವಿಯತ್) ಎಂದು ಕರೆಯುತ್ತಿದ್ದರು. ರಷ್ಯ ದೇಶವನ್ನು ಸಮಾಜವಾದಿ ವಿವಿಧ ಸೋವಿಯತ್‍ಗಳ ಒಕ್ಕೂಟವೆಂದು ಕರೆಯಲಾಗು ತ್ತಿತ್ತು.(ಯು.ಎಸ್.ಎಸ್.ಆರ್.). ಭಾರತ ಮತ್ತು ಯು.ಎಸ್.ಎಸ್.ಆರ್. ಸಂಬಂಧ ಅನ್ಯೋನ್ಯವಾಗಿದ್ದ ಸಂದರ್ಭದಲ್ಲಿ ಭಾರತೀಯ ಸೋವಿಯತ್ ಸಂಬಂಧೀ ಕೃತಿಗಳಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ನೀಡುತ್ತಿದ್ದರು. ಸೋವಿಯತ್ ಪರಿಕಲ್ಪನೆ 1990ರ ದಶಕದಲ್ಲಿ ಬಿದ್ದುಹೋದ ಮೇಲೆ ಇದು ನಿಂತುಹೋಗಿದೆ.			
(ವಿ.ಆರ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ